Index   ವಚನ - 63    Search  
 
ಆಧಾರಕಾಲದಲ್ಲಿ ಅನಾದಿಯನಾಡುತಿಪ್ಪರು ದೇವಗಣಂಗಳು. ಸಿಂಹಾಸನಕಾಲದಲ್ಲಿ ಅತೀತ[ವ]ನಾಡುತಿಪ್ಪರು ಮಹಾಪುರುಷರು. ಮಂದರಗಿರಿಯ ಕಾಲದಲ್ಲಿ ಶಂಕೆಯನಾಡುತಿಪ್ಪರು ಕಾಲಪುರುಷರು. ಆವ ಕಾಲದಲ್ಲಿಯೂ ನಂದಿಕೇಶ್ವರನ ಶಬ್ದವನಾಡುತಿಪ್ಪರು ನಂದಿಗಣಂಗಳು. ಕಲಿಕಾಲದಲ್ಲಿಯೂ ಉತ್ಪತ್ಯದ ಮಾತನಾಡುತಿರ್ಪರು ಪುರುಷಗಣಂಗಳು. ಪ್ರಜ್ವಲಿತಕಾಲದಲ್ಲಿ ಭವಂ ನಾಸ್ತಿಯೆನುತಿರ್ಪರು ಗುರುಕಾರುಣ್ಯವುಳ್ಳವರು. ದೇವಾಧಿದೇವನು ಕಾಲಾಧಿದೇವನು ಎಲ್ಲಾ ಕಾಲ ಸೂತ್ರವನಾಡಿಸುತ್ತಿಹನು. ಸದೃಶ ಕಾಲಾಧಿದೇವನು, ಎಲ್ಲಾ ವಿಸ್ತಾರಕನು, ಗುರು ವಿಸ್ತಾರಕನು, ಜಂಗಮಾಕಾರನು, ಪ್ರಸಾದಕಾಯನು ಜ್ಞಾನಸಿಂಹಾಸನದ ಮೇಲೆ ಕಲಿದೇವಾ, ನಿಮ್ಮ ಶರಣ ಬಸವಣ್ಣನ ನಿಲವು.