Index   ವಚನ - 85    Search  
 
ಎಕನಾತಿಯ ಪೂಜಿಸುವವರು ಬತ್ತಲೆಯಯ್ಯ. ವಿಷ್ಣುವಿನ ಪೂಜಿಸಿದವರು ಭುಜವ ಸುಡಿಸಿಕೊಂಬುದ ನಾ ಕಂಡೆ,ನಾ ಕಂಡೆನಯ್ಯ. ನಿಮ್ಮ ಪೂಜಿಸಿದವರು ಇಹಪರಕ್ಕೆ ಸಾಧನ ಮಾಡಿಕೊಂಡುದ ನಾ ಕಂಡೆ,ನಾ ಕಂಡೆನಯ್ಯಾ ಕಲಿದೇವಯ್ಯ.