ಕಲ್ಯಾಣಪಟ್ಟಣದಲ್ಲಿ ಕಲಕೇತಯ್ಯಗಳು
ಕಿನ್ನರಯ್ಯಗಳ ಸ್ಥಾವರದೈವದ ಸೇವೆ,
ಯಾಚಕತ್ವವ ಬಿಡಿಸಿ,
ಗುರು ಕೊಟ್ಟ ಇಷ್ಟಲಿಂಗದಲ್ಲಿ ನಿಷ್ಠೆಯ ಗಟ್ಟಿಗೊಳಿಸಿ,
ಘನವೀರಶೈವದ ಬಟ್ಟೆಯನರುಹಿದರೆಂಬುದ ಕೇಳಿ ನಂಬದೆ,
ಸೃಷ್ಟಿಯ ಪ್ರತಿಷ್ಠೆಗೆ ಶರಣೆಂದಡೆ,
ಮೆಟ್ಟುವ ನರಕದಲ್ಲಿ ಕಲಿದೇವಯ್ಯ.
Art
Manuscript
Music
Courtesy:
Transliteration
Kalyāṇapaṭṭaṇadalli kalakētayyagaḷu
kinnarayyagaḷa sthāvaradaivada sēve,
yācakatvava biḍisi,
guru koṭṭa iṣṭaliṅgadalli niṣṭheya gaṭṭigoḷisi,
ghanavīraśaivada baṭṭeyanaruhidarembuda kēḷi nambade,
sr̥ṣṭiya pratiṣṭhege śaraṇendaḍe,
meṭṭuva narakadalli kalidēvayya.