ಕಾಲ ನಡೆಯ ಪಶುಗಳೆಲ್ಲಕರೆದು ಹಯನಾದಡೆ
ಮನೆ ಮನೆಗೆ ಅಳೆಯ ಹೊತ್ತು ಬಳಲಲೇಕಯ್ಯಾ?
ಕಾಮಶಾಸ್ತ್ರವ ನೋಡಿದವರೆಲ್ಲ ಕಲಾಪರಿಣಿತರಾದಡೆ
ಜಾರ ಜಾರೆಯರಾಗಲೇತಕೊ ಅಯ್ಯಾ?
ಕೈದುವ ಹಿಡಿದವರೆಲ್ಲ ಕಲಿಗಳಾದಡೆ
ಮಾಬಲವ ಕಂಡು ತಿರುಗಿ ಓಡಿಬರಲೇತಕೆ ಅಯ್ಯಾ?
ಲಿಂಗವ ಕಟ್ಟಿದವರೆಲ್ಲ ನಿಜಭಕ್ತರಾದಡೆ
ಮರಳಿ ಭವಕ್ಕೆ ಬರಲೇಕೋ ಕಲಿದೇವರದೇವಾ