Index   ವಚನ - 130    Search  
 
ಕುಲದಲುತ್ತಮರೆಂಬವರ ಎತ್ತಲು ಕಂಡುದಿಲ್ಲ ಅರಿತಡೆ ಕುಲವೆಲ್ಲವೊಂದೆ, ಸುಣ್ಣ ಬೋವಿತಿಯ ಎಂಜಲು, ಎಣ್ಣೆ ಗಾಣಗಿತ್ತಿಯ ಎಂಜಲು, ಹೊಕ್ಕು ಮೊಗೆವ ನೀರು ಮೇಘದೆಂಜಲು, ಹಾಲು ಮೊಸರು ಬೆಣ್ಣೆ ಮಕ್ಷಕದೆಂಜಲು, ದಾಸಿ ವೇಶಿ ಜಗದೆಂಜಲು, ಇವರೆಲ್ಲರ ಎಂಜಲ ತಿಂದು ಸತ್ತ ಹಾಂಗೆ ಇರಲೊಲ್ಲದೆ- ಕುಲಚಲಕ್ಕೆ ಹೋರುವಿರಿ.ಅದೇನು ಕಾರಣವೆಂದಡೆ : ಗುರುಲಿಂಗ ಜಂಗಮದ ಪಾದೋದಕ ಪ್ರಸಾದವಲ್ಲದೆ ಅಗಲದಾತನೆ ಕುಲಜ ಮಿಕ್ಕಿನವರ ಕುಲಂಗಳೆಲ್ಲ ಅಕ್ಕುಲಂಗಳು ಕಾಣಾ ಕಲಿದೇವರ ದೇವ