Index   ವಚನ - 146    Search  
 
ಗುರುಪ್ರಸಾದಿಗಳಪೂರ್ವ, ಲಿಂಗಪ್ರಸಾದಿಗಳಪೂರ್ವ, ಜಂಗಮಪ್ರಸಾದಿಗಳಪೂರ್ವ. ಗುರುಪ್ರಸಾದಿಯಾದಡೆ ಗುರುವಿಟ್ಟ ತಿಟ್ಟದಲ್ಲಿರಬಲ್ಲಡೆ ಆತ ಗುರುಪ್ರಸಾದಿ. ಲಿಂಗಪ್ರಸಾದಿಯಾದಡೆ ಲಿಂಗಾರ್ಪಿತವಿಲ್ಲದೆ ಕೊಳ್ಳನಾಗಿ ಆತ ಲಿಂಗಪ್ರಸಾದಿ. ಜಂಗಮಪ್ರಸಾದಿಯಾದಡೆ ಮಗುಳ್ದರ್ಪಿಸಬೇಕು. ಇಂತೀ ತ್ರಿವಿಧ ಪ್ರಸಾದದ ಮೂಲವ ನಮ್ಮ ಬಸವಣ್ಣ ಕಲಿಸಿದನಾಗಿ, ನನಗೂ ನಿನಗೂ ಪ್ರಸಾದವೆ ಪ್ರಾಣವೆಂದು, ಪ್ರಸಾದವ ಹಾರುತ್ತಿರ್ದೆನಯ್ಯಾ, ಕಲಿದೇವಯ್ಯ.