Index   ವಚನ - 148    Search  
 
ಗುರುಭಕ್ತಿಯಲ್ಲಿಪ್ಪ, ಲಿಂಗಭಕ್ತಿಯಲ್ಲಿಪ್ಪ, ಜಂಗಮಭಕ್ತಿಯಲ್ಲಿಪ್ಪ, ಪ್ರಸಾದದಲ್ಲಿಪ್ಪ, ಜಂಗಮಕ್ಕೆ ಮಾಡುವಲ್ಲಿಪ್ಪ, ಮಾಡಿಸಿಕೊಂಬಲ್ಲಿಪ್ಪ, ತನು ಮನ ಧನ ಒಂದಾಗಿ ನಿವೇದಿಸುವಲ್ಲಿಪ್ಪ ಸಂಪೂರ್ಣಾತ್ಮನೆಂದು ನಿತ್ಯಂಗೆ ನೀವು ಕಾರುಣ್ಯವ ಮಾಡಿದಿರಿ. ನಿಮ್ಮ ಕಾರುಣ್ಯಕಟಾಕ್ಷದಲ್ಲಿ ಬಸವಣ್ಣನಲ್ಲದೆ ಮಾಡುವರಿಲ್ಲ. ಆ ಬಸವಣ್ಣ ಹೇಳಿತ್ತ ಮೀರೆ ಕಾಣಾ, ಕಲಿದೇವರದೇವ.