Index   ವಚನ - 168    Search  
 
ಜನ್ಮ ಜರೆ ಮರಣ ಭವಭವಾಂತರದಲ್ಲಿ ತೊಳಲುವ, ನೂರೊಂದುಕುಲ ಹದಿನೆಂಟುಜಾತಿಗಿಕ್ಕಿದ, ಅನಂತ ದೈವದುಚ್ಫಿಷ್ಟೋದಕ ಅದರೆಂಜಲನ್ನಪಾನ್ಯವ ತಂದು, ಶ್ರೀಗುರು ಕರುಣಿಸಿಕೊಟ್ಟ ಇಷ್ಟಲಿಂಗಕ್ಕೆ ನೈವೇದ್ಯವ ಮಾಡಿ ಭುಂಜಿಸುವ ಮೂಳಹೊಲೆಯರ ಮನೆಯಲ್ಲಿ ಮಾಡಿದ ಪಾಕವನು, ತ್ರಿವಿಧದೀಕ್ಷಾನ್ವಿತವಾದ ಇಷ್ಟಮಹಾಲಿಂಗಕ್ಕೆ ಅರ್ಪಿಸಿ ಭುಂಜಿಸುವ ಅಧಮ ಹೊಲೆಯರು, ಶತಸಹಸ್ರವೇಳೆ ಶುನಿಸೂಕರಾದಿಗಳಲ್ಲಿ ಜನಿಸಿ, ಅಂತ್ಯದಲ್ಲಿ ಕಾಲಕಾಮರ ಪ್ರಳಯಕ್ಕೊಳಗಾಗದೆ ಮಾಣ್ಬರೇನೊ, ಕಲಿದೇವರದೇವಾ ?