Index   ವಚನ - 187    Search  
 
ತೊತ್ತು ಶೃಂಗಾರವಾದಡೇನೋ ಪುರುಷನುಳ್ಳ ಮುತ್ತೈದೆಯ ಸರಿಯಹಳೆ? ಭಕ್ತರ ನುಡಿಗಡಣ ಸಂಗದಲ್ಲಿರಬೇಕೆಂದು ಗುರುಸಾಹಿತ್ಯಸಂಬಂಧವ ಮಾಡಿದಡೆ, ಅವರೆಲ್ಲರೂ ಭಕ್ತರಾಗಬಲ್ಲರೆ ? ಆಗಲರಿಯರು. ಅದೇನು ಕಾರಣವೆಂದಡೆ: ಸತ್ಯಸದಾಚಾರ ಭಕ್ತಿನಿಷ್ಠೆಯ ನಂಬುಗೆ ಇಲ್ಲವಾದ ಕಾರಣ. ಅಂಥ ಭಕ್ತಿನಿಷ್ಠೆ ನಂಬುಗೆಹೀನನ ಗೃಹದಲ್ಲಿರುವ ಸತಿ ಸುತ ಪಿತ ಮಾತೆ ಸಹೋದರ ಬಂಧುಜನ ಭೃತ್ಯದಾಸಿಯರೊಳಗಾಗಿ ಯಾವನಾನೊಬ್ಬಂಗೆ ಶಿವಾಜ್ಞೆಯಿಂದೆಡರಾಪತ್ತಿಟ್ಟಡೆ, ಬಂಧನ ರುಜೆ ರೋಗ ಮುಂತಾದವರ ತೆರದಿಂದಾದಡೆಯೂ ಶಿವಲಿಖಿತ ತುಂಬಿ ಲಿಂಗದೊಳಗಾದಡೆ, ಪೂರ್ವದ ಶಿವಲಿಂಗವೆಂದು ತಿಳಿವ ನಂಬುಗೆಯಿಲ್ಲದೆ, ಹಂಬಲಿಸಿ ಹಿಡಿಗೊಂಡು ಭ್ರಮಿಸುತ್ತ, ತಾವು ಭಕ್ತರಾಗಿ ಕೆಟ್ಟೆವು, ಮನೆದೈವ ಮುನಿದವು, ಧನಹಾನಿಯಾಯಿತ್ತು, ದರಿದ್ರ ಎಡೆಗೊಂಡಿತ್ತು, ಭಕ್ತರಾಗಿ ಕೆಟ್ಟೆವಿನ್ನು, ಹೇಗೆಂಬ ಭ್ರಷ್ಟರ ಮೆಟ್ಟುವ ನರಕದಲ್ಲಿ, ಕಲಿದೇವಯ್ಯ.