Index   ವಚನ - 189    Search  
 
ದಾಸಿಯ ಸಂಗ ದೇಶವರಿಯೆ ಪಡಗ. ವೇಶಿಯ ಸಂಗ ಹದಿನೆಂಟುಜಾತಿ ನೂರೊಂದುಕುಲವೆಲ್ಲ ವಿಷ್ಟಿಸುವ ಮಲದ ಕುಳಿ. ಪರಸ್ತ್ರೀಯ ಸಂಗ ಪಂಚಮಹಾಪಾತಕ, ಅಘೋರನರಕ. ಇಂತೀ ತ್ರಿವಿಧಸಂಗ ಸಲ್ಲವೆಂಬುದನರಿದು, ಬಿಡದೆ ಬಳಸುವವ ಗುರುವಾದಡಾಗಲಿ, ಚರವಾದಡಾಗಲಿ, ಭಕ್ತನಾದಡಾಗಲಿ, ಇಂತೀ ಗುರುಚರಪರದೊಳಗಾರಾದಡಾಗಲಿ, ಅವರನು ಪತಿತ ಪಾತಕರೆಂದು ಬಿಟ್ಟುಕಳೆಯದೆ, ಅವರನು ತನ್ನವರೆಂದು ಮನ್ನಿಸಿ ಒಳಕೊಂಡನಾದಡೆ, ಅವಂಗೆ ಕುಂಭೀಪಾತಕ, ನಾಯಕನರಕ ತಪ್ಪದೆಂದ, ಕಲಿದೇವಯ್ಯ.