ದ್ವೈತಾದ್ವೈತವೆಂಬ ಉಭಯಕರ್ಮವನತಿಗಳೆದ
ಅಂಗಲಿಂಗಸಂಬಂಧವನುಳ್ಳ ನಿಜವೀರಶೈವಸಂಪನ್ನರು,
ನಮ್ಮ ಸ್ವಯಾಂಗಲಿಂಗವನರ್ಚಿಸುವಲ್ಲಿ
ಭವಿಶೈವ ಭಿನ್ನಕರ್ಮಿಗಳಂತೆ ಬೇರಿಟ್ಟು,
ಅರ್ಘ್ಯಪಾದ್ಯ ಆಚಮನವಾದಿಯಾದ ಉಪಪಾತ್ರೆಗಳಲ್ಲಿ ನೀರನೆರೆದು,
ಪಂಚಮಶುದ್ಧಿ ಪಂಚಾಮೃತಾಭಿಷೇಕವ ಮಾಡಿ,
ತನ್ನ ಲಿಂಗವನರ್ಚಿಸಿ, ಪ್ರಸಾದವ ಕೊಂಡೆನೆಂಬ ಜಡಶೈವ
ಭಿನ್ನಕರ್ಮವನುಳ್ಳ ಕುನ್ನಿಗಳು
ಎನ್ನ ಲೋಕಕ್ಕೆ ಹೊರಗೆಂದ, ಕಲಿದೇವಯ್ಯ.
Art
Manuscript
Music
Courtesy:
Transliteration
Dvaitādvaitavemba ubhayakarmavanatigaḷeda
aṅgaliṅgasambandhavanuḷḷa nijavīraśaivasampannaru,
nam'ma svayāṅgaliṅgavanarcisuvalli
bhaviśaiva bhinnakarmigaḷante bēriṭṭu,
arghyapādya ācamanavādiyāda upapātregaḷalli nīraneredu,
pan̄camaśud'dhi pan̄cāmr̥tābhiṣēkava māḍi,
tanna liṅgavanarcisi, prasādava koṇḍenemba jaḍaśaiva
bhinnakarmavanuḷḷa kunnigaḷu
enna lōkakke horagenda, kalidēvayya.