Index   ವಚನ - 207    Search  
 
ನಾವು ಶರಣರೆಂದು ಒಪ್ಪವಿಟ್ಟು ನುಡಿವ ಅಣ್ಣಗಳಿರಾ ನೀವು ಶರಣರಾದ ಭೇದವ ಹೇಳಿರಣ್ಣ. ಅರಿಯದಿರ್ದಡೆ ಕೇಳಿರಣ್ಣ, ಶರಣತ್ವದ ಭೇದಾಭೇದವ. ತನುವಿನ ಕಾಂಕ್ಷೆಯ ಸುಟ್ಟುರುಹಿ, ಮನದ ಲಜ್ಜೆಯ ಮರೆದು, ಭಾವದ ಭ್ರಮೆಯ ಹೊಟ್ಟುಮಾಡಿ ತೂರಿ, ಸದ್ಭಕ್ತಿ ನಿಜನೈಷ್ಠೆಯ ತಿಳಿದು, ಸತಿಸುತರಿಗೆ ಸದಾಚಾರದ ಸನ್ಮಾರ್ಗವ ತೋರಿ, ಗುರುಲಿಂಗಜಂಗಮವೆ ಮನೆದೈವ ಮನದೈವ ಕುಲದೈವವೆಂದು ಭಾವಿಸಿ, ನಿರ್ವಂಚಕತ್ವದಿಂದ ಅರಿದಾಚರಿಸಬಲ್ಲಾತನೆ, ಅಚ್ಚಶರಣ ನೋಡಾ, ಕಲಿದೇವರದೇವ.