ಉಪಾಧಿಕ ಮನವು!
ಉಪಾಧಿಕರಹಿತನ ಮನವು ನಿಂದಲ್ಲಿ ನಿವಾತವಾಗಿತ್ತು.
ಆನಂದದ ಭಾವವು!
ಬಿಂದು ತಾನುಳಿದು ನಿಂದಲ್ಲಿ ನಿವಾತವಾಯಿತ್ತು.
ಲಿಂಗೋದಯ ಪ್ರಜ್ವಲಿಸುತ್ತಿದೆ,
ಗುಹೇಶ್ವರಲಿಂಗವು ತಾನೆಯಾಗಿ!
Transliteration Upādhika manavu!
Upādhikarahitana manavu nindalli nivātavāgittu.
Ānandada bhāvavu!
Bindu tānuḷidu nindalli nivātavāyittu.
Liṅgōdaya prajvalisuttide,
guhēśvaraliṅgavu tāneyāgi!
English Translation 2 Where the mind,
Conditioned or unconditioned,
Stops,
There stillness reigns.
Where consciousness
Of being oneself a point
Reaches
An end,
There ecstasy dwells.
I have beheld,
O Guheśvara,
The light of the Linga as
A resplendent blaze!
Hindi Translation ओहदे का मन !
बिना ओहदे मन शांत हुआ था
आनंद भाव!
बिंदु नाश होने से शांत हुआ था
गुहेश्वर लिंग स्वयं होकर,
लिंगोदय चमक रहा है।
Translated by: Eswara Sharma M and Govindarao B N
Tamil Translation சுழன்று அலையும் மனம்!
அலையும் மனம் அடங்கி அமைதியுற்றது,
இன்ப உணர்வு!
பிந்து அழிந்தபொழுது அமைதியுற்றது,
குஹேசுவலிங்கம் தானேயாகி
இலிங்க உதயம் ஒளிர்கிறது.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆನಂದಭಾವ = ಆತ್ಮಾನಂದದ ಅನುಭವ; ಉದಯ = ಸಾಕ್ಷಾತ್ಕಾರ; ಉಪಾಧಿಕ ಮನ = ವೃತ್ತಿಸಹಿತವಾದ ಮನಸ್ಸು; ಉಪಾಧಿರಹಿತ ಮನ = ವೃತ್ತಿರಹಿತವಾದ ಮನಸ್ಸು; ನಿವಾತವಾಗು = ಶಾಂತವಾಗು; ಬಿಂದು = ಕಲ್ಪನೆ, ಚಿಹ್ನೆ, ಗುರುತು;
Written by: Sri Siddeswara Swamiji, Vijayapura