Index   ವಚನ - 225    Search  
 
ಪರಮವಿಭೂತಿಯ ಹಣೆಯಲ್ಲಿ ಧರಿಸಿ, ಕೊರಳಲ್ಲಿ ರುದ್ರಾಕ್ಷಿಯ ಧರಿಸಿ, ಗುರು ಕೊಟ್ಟ ಲಿಂಗವ ಕರದಲ್ಲಿ ಧರಿಸಿ, ಮರಳಿ ಮತ್ತೆ ಧರೆಯ ಪ್ರತಿಷ್ಠೆಗೆರಗುವ ನರಕಿಜೀವಿಗಳನೇನೆಂಬೆನಯ್ಯಾ, ಕಲಿದೇವಯ್ಯ.