Index   ವಚನ - 239    Search  
 
ಬಸವಣ್ಣನ ಕಿರುಗೊಳಗೆ ನಾಗಲೋಕದ ನಾಗಗಣಂಗಳೆನಿಸುವುದು. ಬಸವಣ್ಣನ ಜಾಣು ಜಂಘಯೆ ಮರ್ತ್ಯಲೋಕದ ಮಹಾಗಣಂಗಳೆನಿಸುವುದು. ಬಸವಣ್ಣನ ನಾಭಿಯೆ ದೇವಲೋಕದ ದೇವಗಣಂಗಳೆನಿಸುವುದು. ಮೇಲಣ ಘನವ ಹೊಗಳುವಡೆ ಎನ್ನಳವಲ್ಲ ಕಲಿದೇವಾ. ಇನ್ನು ಹೊಗಳುವಡೆ ನಿನ್ನಳವಲ್ಲವೆ ಬಸವಣ್ಣನ.