Index   ವಚನ - 251    Search  
 
ಬಿದ್ದು ಸತ್ತ [ಪಶು]ವ ತಿಂಬ ಹೊಲತಿಗೆ ಹೊಲೆಗಂಡು, ಶುದ್ಧನೀರ ಮಿಂದಡೆ, ಅವಳ ಮೊದಲ ಹೊಲೆ ಹೋಯಿತ್ತೆ? ಮದ್ಯವ ಸೇವಿಸುವ ಹೊಲೆಯರು, ದೈವಕ್ಕೆರಗಿ, ಕುಲದಲ್ಲಿ ಶುದ್ಧರಹೆವೆಂಬ ಪರಿಯೆಂತೊ? ಮಲಭಾಂಡದ ಕುಲವೆಲ್ಲಾ ಒಂದೆ. ಗೆಲುವಿಂಗೆ ಹೆಣಗುವ ಹದಿನೆಂಟುಜಾತಿಗಳು, ಗುರುವಿನ ನೆಲೆಯನರಿಯದೆ, ಕೆಟ್ಟಪ್ರಾಣಿಗಳನೇನೆಂಬೆನಯ್ಯಾ, ಕಲಿದೇವರದೇವ?