Index   ವಚನ - 253    Search  
 
ಬೋಳಿಗೇಕೊ ತ್ರಿಭಸ್ಮಸುರೇಖೆ? ಗುರುವಿಗೇಕೊ ಕೊನರು? ಜಂಗಮಕ್ಕೇಕೊ ಭರವಶ? ಲಿಂಗಕ್ಕೇಕೊ ಮುನ್ನೀರು? ಭಕ್ತಂಗೇಕೊ ಖ್ಯಾತಿಯ ಲಾಭ? ಇಂತಿವರು ತಾಳಬಿಟ್ಟು ಕುರಸವ ಕೊಂಡು, ದಡಿಗೀಡಾಗಿ ಹೊಡೆಯಿಸಿಕೊಳಬೇಡ. ಮುಂದೆ ಮೇಲಣವರುಹ ನೋಡಿ, ಬದುಕೆಂದನು ಮಾಚಯ್ಯ, ಕಲಿದೇವರದೇವಾ.