Index   ವಚನ - 258    Search  
 
ಭಕ್ತ ಮಾಹೇಶ್ವರರ ಇಷ್ಟಲಿಂಗವು, ಶಕ್ತಿಸಂಪುಟದಿಂದ ಉತ್ಕೃಷ್ಟವಾದರೆ, ಕಾಯವಳಿದೆನೆಂಬ ಕರ್ಮವ ನೋಡಾ. ಕಾಯವಳಿದು ಕರ್ಮಕ್ಕೆ ಗುರಿಯಾಗದೆ ಮುನ್ನಿನಂತೆ ಪೂಜಿಸುವ ಮುಕ್ತರ ತೋರಿಸಯ್ಯಾ. ಅದೆಂತೆಂದಡೆ: ಅನಾದಿಪ್ರಣಮ, ಆದಿಪ್ರಣಮ, ಅಂತ್ಯಪ್ರಣಮ, ನಾದಪ್ರಣಮ, ಅನಾದ ಪ್ರಣಮವೆಂಬ ಪಂಚಪ್ರಣಮಂಗಳ ಪಂಚಸ್ಥಾನದಲ್ಲಿ ಪ್ರತಿಷ್ಠಿಸಿ, ನಾ ನೀನೆಂಬ ಆನಂದವ ಆರುಹಿಸಿಕೊಟ್ಟನಯ್ಯಾ ಶ್ರೀಗುರು. ಇಂತೀ ಭೇದಾದಿಭೇದದ ಆದಿಯನರಿಯದೆ, ಕಾಯವಳಿದೆಹೆನೆಂಬ ಕರ್ಮಭಾಂಡಿಗಳ ಮೆಚ್ಚುವನೆ, ಕಲಿದೇವರದೇವ.