Index   ವಚನ - 311    Search  
 
ಶ್ರೀಗುರುವೆ ಕರ್ತನೆಂದು ಪ್ರಸಾದ ಕೊಂಬ ಪ್ರಸಾದದೇಹಿಗಳು, ನೀವು ಕೇಳಿ ಭೋ. ಪ್ರಸಾದವಾಯತವನಾಯತವೆಂಬ ಅನಾಚಾರಿಗೆ ಸದಾಚಾರದ ಶುದ್ಧಿಯೆಲ್ಲಿಯದೊ? ಈ ತ್ರಿವಿಧ ಅಚೇತನಂಗೆ ಮುಕ್ತಿಯುಂಟೆಂಬ ಮೂಕೊರೆಯರ ನೋಡಾ. ಈ ಮಹಾದಿವ್ಯಪ್ರಸಾದ ಸುಖವನರಿದು, ಚೆನ್ನಬಸವೇಶ್ವರನುದ್ಭವಿಸಿದನು. ಈ ಪ್ರಸಾದಕ್ಕೆ ಅಯತ ಅನಾಯತವೆಂಬ ಅನಾಚಾರಿಯ ಮುಖವನೆನಗೆ ತೋರದಿರು. ಇಂತಪ್ಪ ಮಹಾಪ್ರಸಾದವ ಕೊಂಡು, ನಾನು ಬದುಕಿದೆನಯ್ಯಾ, ಕಲಿದೇವಯ್ಯ.