ಸನ್ಮಾರ್ಗದ ವಿಚಾರವ ಸದ್ಗುರು ಮುಖದಿಂ ತಿಳಿದು,
ತನ್ನಂತರಂಗ ಬಹಿರಂಗದ ಸಂದುಸಂಶಯವ ಪರಿಹರಿಸಿ,
ನಿಶ್ಚಿಂತನಾಗಿ ನಿಜದಲ್ಲಿ ನಿಂದು, ಲಿಂಗಕ್ಕಾಚಾರವ ಸಂಬಂಧಿಸಿ,
ಮನಕ್ಕೆ ಅರಿವಿನಾಚರಣೆಯ ನೆಲೆಗೊಳಿಸಿ,
ಆತ್ಮಂಗೆ ಸತ್ಕ್ರಿಯಾ ಸಮ್ಯಕ್ಜ್ಞಾನವ ಬೋಧಿಸಿ,
ಪ್ರಾಣಕ್ಕೆ ಲಿಂಗಮಂತ್ರಧಾರಣವ ಮಾಡಿ,
ಜೀವ ಪರಮರಿಗೆ ಚಿದ್ಘನಪಾದೋದಕಸಾದಭೋಗವನಿತ್ತು,
ಅವಕ್ಕೆ ತಾನಾಶ್ರಯನಾಗಿ, ತನ್ನ ನಿಜದಲ್ಲಿ ನಿಂದು
ನೋಡಬಲ್ಲಾತನೆ ಶಿವಯೋಗಿ ನೋಡಾ, ಕಲಿದೇವರದೇವ
Art
Manuscript
Music
Courtesy:
Transliteration
Sanmārgada vicārava sadguru mukhadiṁ tiḷidu,
tannantaraṅga bahiraṅgada sandusanśayava pariharisi,
niścintanāgi nijadalli nindu, liṅgakkācārava sambandhisi,
manakke arivinācaraṇeya nelegoḷisi,
ātmaṅge satkriyā samyakjñānava bōdhisi,
prāṇakke liṅgamantradhāraṇava māḍi,
jīva paramarige cidghanapādōdakasādabhōgavanittu,
avakke tānāśrayanāgi, tanna nijadalli nindu
nōḍaballātane śivayōgi nōḍā, kalidēvaradēva