Index   ವಚನ - 322    Search  
 
ಸಿಂಹದ ಮುಂದೆ [ಜಿಂಕೆಯ] ಜಿಗಿದಾಟವೆ? ಪ್ರಳಯಾಗ್ನಿಯ ಮುಂದೆ ಪತಂಗದಾಟವೆ? ಸೂರ್ಯನ ಮುಂದೆ ಕೀಟದಾಟವೆ? ನಿಮ್ಮ ಮುಂದೆ ಎನ್ನಾಟವೆ, ಕಲಿದೇವರದೇವಾ?