ಹಸಿವು ತೃಷೆ ವ್ಯಸನಕ್ಕೆ ಕುದಿ ಕುದಿದು
ಸಚರಾಚರದೊಳಗೆಲ್ಲ ಲಯವಾಗಿ ಹೋದರಲ್ಲ.
ಉದರವ ಹೊರೆವ ಕೋಟಿವೇಷಧಾರಿಗಳೆಲ್ಲ
ಜಂಗಮವಪ್ಪರೇ? ಅಲ್ಲ.
ಲಿಂಗಸ್ಥಲವನರಿಯರು, ಜಂಗಮಸ್ಥಲವನರಿಯರು,
ಪ್ರಸಾದಿಸ್ಥಲವನರಿಯರು.
ಇಂತೀ ತ್ರಿವಿಧ ಸ್ಥಲವನರಿಯದ ಕಾರಣಾ
ಅವರ ಗಾವಿಲರ ಮಕ್ಕಳೆಂಬೆ, ಕಲಿದೇವರದೇವಾ
Art
Manuscript
Music
Courtesy:
Transliteration
Hasivu tr̥ṣe vyasanakke kudi kudidu
sacarācaradoḷagella layavāgi hōdaralla.
Udarava horeva kōṭivēṣadhārigaḷella
jaṅgamavapparē? Alla.
Liṅgasthalavanariyaru, jaṅgamasthalavanariyaru,
prasādisthalavanariyaru.
Intī trividha sthalavanariyada kāraṇā
avara gāvilara makkaḷembe, kalidēvaradēvā