ಎಲ್ಲವನರಿದು ಬಿಟ್ಟ ಬಳಿಕ,
ಮತ್ತಿನ್ನು ಗೆಲ್ಲ ಸೋಲಕ್ಕೆ ಸನ್ನೆಯ ತಗರಿನಂತೆ,
ಹರಿವ ಸಮೂಹವನೊಲ್ಲದೆ,
ತಾ ನಿಂದಲ್ಲಿಯೆ ಸುಖವು.
ಅರ್ಕೇಶ್ವರಲಿಂಗವನರಿವುದಕ್ಕಿದೇ ಗೊತ್ತು.
Art
Manuscript
Music
Courtesy:
Transliteration
Ellavanaridu biṭṭa baḷika,
mattinnu gella sōlakke sanneya tagarinante,
hariva samūhavanollade,
tā nindalliye sukhavu.
Arkēśvaraliṅgavanarivudakkidē gottu.