ಕರಿಯ ಮುತ್ತಿನ ಹಾರದ ಪರಿಯೊಂದು ಶೃಂಗಾರ,
ಕರದ ಬಣ್ಣದ ನುಡಿಯ ಬೆಡಗಿನೊಳಗಡಗಿತ್ತು.
ಸಿಡಿಲ ಬಣ್ಣವನುಟ್ಟು ಮಡದಿ ಒಂದೂರೊಳಗೆ
ಕಡುಗಲಿಯ ವಿದ್ಯೆಯನು ನೋಡಿ,
ನೋಡದ ನಿರ್ಭಾವ ವೀರವಿತರಣೆಯಿಂದ,
ಧಾರುಣಿಯ ರಚನೆಯ, ಗುಹೇಶ್ವರನೆಂಬ ಲಿಂಗವ
ಬೆಡಗು ನುಂಗಿ ಅಡಗಿತ್ತು.
Transliteration Kariya muttina hārada pariyondu śr̥ṅgāra,
karada baṇṇada nuḍiya beḍaginoḷagaḍagittu.
Siḍila baṇṇavanuṭṭu maḍadi ondūroḷage
kaḍugaliya vidyeyanu nōḍi,
nōḍada nirbhāva vīravitaraṇeyinda,
dhāruṇiya racaneya, guhēśvaranemba liṅgava
beḍagu nuṅgi aḍagittu.
Hindi Translation काले मोति हार की रीति श्रुंगार,
हाथ का रंग बोली चमक में छिपा था!
बिजली रंग पहनकर पत्नि गाँव में
धीर की विद्या देखे,
बिना देखे जैसे समर्पण भाव से !
धारुणी की रचना गुहेश्वर जैसे लिंग का
अनुभव निगल छिपा था।
Translated by: Eswara Sharma M and Govindarao B N
Tamil Translation இருள் அகன்றிட முத்துமாலை அழகிய அணிகலனன்றோ.
நான் ஆன்மா எனும் ஞானம் ஒளியினுள் அடங்கியது!
மின்னல்வண்ணத்தில் உடுத்தி, மனைவி ஒரு ஊரிலே
இலிங்க ஞானமுற்றதைக் காணாய்!
வீரத்தியாகத்துடன் அர்ப்பித்து
ஒடுங்க, பேருலகமானது குஹேசுவரனெனும்
இலிங்கப் பேரழகிலே அடங்கியதன்றோ.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಊರು = ಅಂತರಂಗ; ಕಡುಗಲಿ = ಘನಲಿಂಗ; ಕರ = ಹಸ್ತ, ಲಿಂಗಕ್ಕೆ ಸಂಕೇತ; ಕರಿ = ಕಪ್ಪು, ಅಜ್ಞಾನ; ಧಾರುಣಿಯ ರಚನೆ = ತನುಮನಂಗಳನ್ನೆಲ್ಲ ಒಳಗೊಂಡ ಮಹಾಭೌತವಿಶ್ವ; ನುಡಿ = ಜ್ಞಾನ; ಬಣ್ಣ = ಸ್ವರೂಪ; ಮಡದಿ = ಶರಣ; ಮುತ್ತು = ಅಜ್ಞಾನ ನಿವೃತ್ತಿಯ ಸಂಕೇತ; ಲಿಂಗದ ಬೆಡಗು = ಘನಲಿಂಗದೊಳು ಒಂದಾದ ಅಪೂರ್ವ ಅನುಭವ; ವೀರವಿತರಣೆ = ತ್ಯಾಗಪೂರ್ಣ, ಔದಾರ್ಯ, ಸಮರ್ಪಣಭಾವ; ಶೃಂಗಾರ = ಅಲಂಕರಣ; ಸಿಡಿಲ ಬಣ್ಣ = "ಶಿವೋsಹಂ" ಎಂಬ ದಿವ್ಯಜ್ಞಾನಪ್ರಕಾಶ;
Written by: Sri Siddeswara Swamiji, Vijayapura