ಅಂಗದೊಳಗಣ ಲಿಂಗ,
ಲಿಂಗದೊಳಗಣ ಅಂಗ;
ಅಂಗ-ಲಿಂಗ ಸಂಗ ಹಿಂಗದಂತೆ ಮಾಡಿರೆ.
ದೇವ ದೇವ ಎಂಬಿರಿ ಬಲ್ಲವರು,
ಲಿಂಗವ, ಬಲ್ಲವರು ಹಿಡಿದುಕೊಳ್ಳಿರೆ!
ತಾ ಸತ್ತು ಲಿಂಗವ ಕೂಡಿಹೆನೆಂದಡೆ
ಗುಹೇಶ್ವರಂಗೆ ಬೇರೊಂದು ಠಾವುಂಟೆ ಹೇಳಿರೆ?
Transliteration Aṅgadoḷagaṇa liṅga,
liṅgadoḷagaṇa aṅga;
aṅga-liṅga saṅga hiṅgadante māḍire.
Dēva dēva embiri ballavaru,
liṅgava, ballavaru hiḍidukoḷḷire!
Tā sattu liṅgava kūḍ'̔ihenendaḍe
guhēśvaraṅge bērondu ṭhāvuṇṭe hēḷire?
Hindi Translation अंग में मिले लिंग, लिंग में मिले अंग;
अंग-लिंग संग न दूर हो ऐसा कीजिए।
देव देव कहेंगे ज्ञानी,
लिंग जाननेवाले पकड़ लीजिए।
खुद मरकर लिंग से मिले कहें तो
गुहेश्वर को और कोई ठाँव है कहिए ?
Translated by: Eswara Sharma M and Govindarao B N