ವಚನ - 712     
 
ಅಂಗನೆಯ ಮೊಲೆ ಲಿಂಗವೆ? ಬಳ್ಳ ಲಿಂಗವೆ? ಕಿತ್ತು ಬಹ ಸಾಣೆ ಲಿಂಗವೆ? ಆಡಿನ ಹಿಕ್ಕಿ ಲಿಂಗವೆ? ಮೆಚ್ಚುವರೆ ಪ್ರಮಥರು? ಮೆಚ್ಚುವರೆ ಪುರಾತನರು, ನಿಮ್ಮ ಭಕ್ತರು? ಭಾವಭ್ರಮೆಯಳಿದು, ಗುಹೇಶ್ವರಾ ನಿಮ್ಮಲ್ಲಿ ಅನಾದಿಸಂಸಿದ್ಧವಾದ ಜಂಗಮವನರಿದಾತ ಬಸವಣ್ಣನೊಬ್ಬನೆ.