Index   ವಚನ - 2    Search  
 
ಆರನಾದಡೂ ಅಯ್ಯಾ ಎಂದೆನಲಾರೆ. ಆರನಾದಡೂ ದೇವಾ ಎಂದೆನಲಾರೆ. ನೀನು ಜಗಭರಿತನಾಗಿ ನಾನು ನಿಮ್ಮನೇ ಅಯ್ಯಾ ಎಂಬೆ. ಎನಗಾರೂ ಇಲ್ಲದ ಕಾರಣ ನೀವೇ ಶರಣೆಂಬೆ, ಶ್ರೀಮಲ್ಲಿಕಾರ್ಜುನಾ.