Index   ವಚನ - 12    Search  
 
ಭಾವಾಭಾವಂಗಳನೊಲ್ಲದಿರ್ದಡೆ ಭಾವಿಯಭಾವಿಯ ಲೋಕಂಗಳ ಸುಡು. ಸವಿಯೆಂಬೆ ಹೋ ! ಹೋ ! ಹಾ ! ಹೋ ! ಹಾ ! ಬ್ರಹ್ಮ[ ತಾ ] ಬಂದು ಭವನ ಭುಜಂಗಳ ತಕ್ಕೈಸಿ ನಿಂದ ಹೋ ! ಹಾ ! ಹೋ ! ಹಾ ! ವಿಷ್ಣು ತಾ ಬಂದು ಶ್ರೀಪದಪದ್ಮಂಗೆ ಹತ್ತಿಯೇ ನಿಂದ ನಿಮ್ಮ ರೋಮದ ಸಾಮರ್ಥ್ಯಂಗಳು ಕ್ರೀವಿಡಿದಿರ್ದಡೆ ಆ ಭವವೆಲ್ಲ ಮುರಿದು ನಿಂದೋಡಿದವು. ನಿಮ್ಮ ರೋಮ ಸಾಮಥ್ರ್ಯಂಗಳಂತಹವು. ಇಂತಹವು ನಿಮ್ಮ, ಕೇಳಯ್ಯಾ ಕೇಳಯ್ಯಾ ಶ್ರೀಮಲ್ಲಿಕಾರ್ಜುನಯ್ಯ ಶರಣಾ.