Index   ವಚನ - 2    Search  
 
ಚಕ್ರಿಯ ಕುಲವಾಸ ಮೃತ್ತಿಕೆಯಂತೆ, ಏನ ನೆನೆದಡೂ ಅಪ್ಪುವಾರುವುದಕ್ಕೆ ಮುನ್ನವೆ, ಚಿತ್ತದಲ್ಲಿ ತೋರುವ ತೋರಿಕೆ, ಚಿತ್ರಕುಂಭಂಗಳ ಒಪ್ಪೊಪ್ಪದಲ್ಲಿ ಅಹ ತೆರನಂತೆ, ವಸ್ತು ತನ್ನಯ ಭಾವದಲ್ಲಿ ನಿಶ್ಚಯವಾಗಿ ನಿಂದಲ್ಲಿ, ಕೃತ್ಯ ಅಕೃತ್ಯವೆಂಬ ಹೆಚ್ಚುಕುಂದಿಲ್ಲ. ಕರ್ಮವಿಲ್ಲದ ಪೂಜೆ, ನಿರ್ಮಲವೆಂಬುದು ತೋರದ ಆ ಜಡ, ಉಮ್ಮಳ ದುಮ್ಮಳವೆಂಬ ಉಭಯವಳಿದ ಸುಮ್ಮಾನಸುಖಿಗೆ ಕರ್ಮ ನಿರ್ಮಲವೆಂಬುದೊಂದದೂ ಇಲ್ಲ, ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ, ಅರಿ ನಿಜಾ[ತ್ಮಾ] ರಾಮ ರಾಮನಾ.