ನರಕುಲ ಹಲವಾದಲ್ಲಿ,
ಯೋನಿಯ ಉತ್ಪತ್ಯ ಒಂದೇ ಭೇದ.
ಮಾತಿನ ರಚನೆ ಎಷ್ಟಾದಡೇನು ?
ನಿಹಿತವರವುದು ಒಂದು ಭೇದ.
ವಸ್ತು ಜಾತಿ ಗೋತ್ರ ವಿಶೇಷವೆಂಬಲ್ಲಿ,
ದಿವಾರಾತ್ರಿಯೆಂಬ ಉಭಯವನಳಿವುದಕ್ಕೆ
ತಮ ಬೆಳಗೆರಡೆಂಬವಲ್ಲದಿಲ್ಲ.
ಕುಲ ಉಭಯಶಕ್ತಿ ಪುರುಷತ್ವವಲ್ಲದಿಲ್ಲ,
ಬೇರೆ ಹಲವು ತೆರನುಂಟೆಂದಡೆ,
ಮೀರಿ ಕಾಬ ಶ್ರುತ ದೃಷ್ಟ ಇನ್ನಾವುದು ?
ಎಲ್ಲಕ್ಕೂ ನೀರು ನೆಲ ಸೂರ್ಯ ಸೋಮ
ಆರೈದು ನೋಡುವ ದೃಷ್ಟಿಯೊಂದೆ ಬೊಂಬೆ,
ಬೊಂಬ ಹಲವ ನೋಡಿಹೆ,
ಬೊಂಬೆ ಹಲವಂದ ಕಾಣ್ಬಂತೆ.
ಅದರಂಗವ ತಿಳಿದು ನಿಂದಲ್ಲಿ,
ಹಲವು ಕುಲದ ಹೊಲೆಯೆಂದೂ ಇಲ್ಲವೆಂದೆ.
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ.