Index   ವಚನ - 6    Search  
 
ರಜ್ಜು ರಸ ಕೂಡಿ ಅಗ್ನಿ ಮುಟ್ಟಿ ಉರಿದಲ್ಲಿ, ಅದೇತರ ಹೊದ್ದಿಗೆಯ ಬೆಳಗು ? ರಜ್ಜು, ರಸದಿಂದವೋ ? ಆಗ್ನಿಯ ಭಾವದಿಂದವೋ ? ಈ ಮೂರರ ಹೊಲಬಿನ ಹೊದ್ದಿಕೆಯಲ್ಲಿ ಬೆಳಗುವ ಪ್ರಜ್ವಲಿತ ಅನಲನ ಕೂಡುವಿನೊಳಗಾಯಿತ್ತು. ಕಾಯದ ಕರ್ಮದ ಜ್ಞಾನದಿಂದ ಕಂಡೆಹೆನೆಂದಡೆ, ನಾಮವಿಲ್ಲದ ರೂಪು, ಭಾವದಿಂದ ಅರಿವ ಠಾವಾವುದು ? ಒಂದರಿಂದ ಒಂದ ಕಂಡೆಹೆನೆಂಬ ಸಂದೇಹ, ಇನ್ನೆಂದಿಗೆ ಹರಿಗು ? ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ, ಅರಿ ನಿಜಾ[ತ್ಮಾ] ರಾಮ ರಾಮನಾ.