•  
  •  
  •  
  •  
Index   ವಚನ - 72    Search  
 
ಹೊನ್ನು ಮಾಯೆ ಎಂಬರು, ಹೊನ್ನು ಮಾಯೆಯಲ್ಲ. ಹೆಣ್ಣು ಮಾಯೆ ಎಂಬರು, ಹೆಣ್ಣು ಮಾಯೆಯಲ್ಲ. ಮಣ್ಣು ಮಾಯೆ ಎಂಬರು, ಮಣ್ಣು ಮಾಯೆಯಲ್ಲ. ಮನದ ಮುಂದಣ ಆಸೆಯೆ ಮಾಯೆ ಕಾಣಾ ಗುಹೇಶ್ವರಾ.
Transliteration Honnu māye embaru, honnu māyeyalla. Heṇṇu māye embaru, heṇṇu māyeyalla. Maṇṇu māye embaru, maṇṇu māyeyalla. Manada mundaṇa āseye māye kāṇā guhēśvarā.
Music Courtesy: Program Name : Paramaguru Sri Allama Prabhu Devara Vachanagalu Singer Name : Narasimha Nayak Music Director : Parvathi Sutha Music Label : MRT Music
Video
Hindi Translation सोना माया कहते हैं, स्त्री माया कहते हैं, मिट्टी माया कहते हैं; सोना माया नहीं, स्त्री माया नहीं, मिट्टी माया नहीं, मन के आगे की आशा की माया देखो गुहेश्वरा । Translated by: Eswara Sharma M and Govindarao B N
Tamil Translation பொன்மாயை என்பர், பெண்மாயை என்பர் மண்மாயை என்பர் பொன்மாயையன்று, பெண்மாயையன்று, மண்மாயையன்று இன்பங்களைத் துய்க்கக்கருதும் மனத்தின் ஆசைதான் மாயை காணாய் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಸೆ = ಆಯಾ ವಿಷಯಗಳನ್ನು ತನ್ನದನ್ನಾಗಿಸಿಕೊಳ್ಳುವ ಮತ್ತು ಅನುಭವಿಸುವ ತೀವ್ರ ಬಯಕೆ.; ಮನದ ಮುಂದಣ = ಮನದಲ್ಲಿ ಪ್ರಾಮುಖ್ಯವಾಗಿ ತೋರುವ, ಮನವನ್ನೆಲ್ಲ ತುಂಬಿಕೊಂಡಿರುವ.; ಮಾಯೆ = ಮರೆವು, ಆಕರ್ಷಣೆ ಹಾಗೂ ಬಂಧನಗಳನ್ನುಂಟುಮಾಡುವ ಒಂದು ಶಕ್ತಿ ವಿಶೇಷ; Written by: Sri Siddeswara Swamiji, Vijayapura