Index   ವಚನ - 3    Search  
 
ಅಂಗಲಿಂಗಸಂಬಂಧದಿರವು, ಬೀಜವೊಡೆದು, ಮೊಳೆದೋರುವಂತೆ, ಕುಸುಮ ಬಲಿದು, ದೆಸೆದೆಸೆಗೆ ವಾಸನೆ ಪಸರಿಸುವಂತೆ, ಭೂಜಲ ಉಣ್ಮೆ ಪರಿವ ತೆರನಂತೆ ಘನಲಿಂಗ ಘಟ, ಕುರುಹಿನಲ್ಲಿ ನಿಜದೋರುತ್ತದೆ. ಐಘಟದೂರ ರಾಮೇಶ್ವರಲಿಂಗ ಮೂರ್ತಿ, ಅಮೂರ್ತಿ ಆಗುತ್ತದೆ.