Index   ವಚನ - 8    Search  
 
ಅಪ್ಪುಮಯ ಬಲಿದು, ಜಗ ಸಾಕಾರವಾಗಿ ನಿಂದಲ್ಲಿ, ಧರೆ ಸಲಿಲ ಅನಲ ಕುರುಹಾಗಿ ನಿಂತಿತ್ತು. ಅವು ನಿಳಯಾಂತವಾಗಿ ವಾಯು ಘಟಿಸಿತ್ತು. ಇಂತಿವು ಪಂಚಬ್ರಹ್ಮ ಮೂರ್ತಿ ಐಘಟವಾಯಿತ್ತು, ಇಂತಿವು ಪ್ರಳಯಕ್ಕೊಳಗೆಂದು ಹೊರಗಾಗಿ ನಿಂದ, ಐಘಟದೂರ ರಾಮೇಶ್ವರಲಿಂಗ.