Index   ವಚನ - 34    Search  
 
ಕಲ್ಪಿಸಿ ಅರ್ಪಿಸಿ, ಅರ್ಪಿಸಿ ಭೋಗಿಸಲಿಲ್ಲ, ಅರ್ಪಿತ ಅನರ್ಪಿತವೆಂಬೆರಡಳಿದನಾಗಿ. ಕಾಯದ ಕೈಗಳಲ್ಲಿ, ಮನದ ಕೈಗಳಲ್ಲಿ, ಭಾವದ ಕೈಗಳಲ್ಲಿ ಅರ್ಪಿಸುವವನಲ್ಲ, ಆತ ಅನರ್ಪಿತನಾಗಿ. ಅರ್ಪಿತ ಅನರ್ಪಿತವೆಂಬೆರಡಳಿದನಾಗಿ, ಕೂಡಿದೆನಗಲಿದೆ, ಅಳಿದೆನುಳಿದೆನೆಂದಡೆ, ಸಂದನಳಿದ ಸದಮಲಾನಂದಸಿಂಧು [ಐಘಟದೂರ] ರಾಮೇಶ್ವರನು ತಾನೆ.