ಕ್ರೀಭಾವಶುದ್ಧತೆ ಆದವನಿರವು, ಬೆಂಕಿ ಕಾಷ್ಠವ ಕೂಡಿ,
ದ್ವಂದ್ವವಾಗಿ ಉರಿದು, ಹಿಂಗಿ ನಂದಿದಂತಿರಬೇಕು.
ಹುಳಿ ಸಿಹಿಯ ಕೂಡಿ, ಕೂಟಸ್ಥದಿಂದ ಉಳುಮೆಯ ಘೃತದಂತಿರಬೇಕು.
ವಿಷ ಶರೀರದಲ್ಲಿ ವೇಧಿಸಿ, ದೆಸೆಯನಳಿದಂತಿರಬೇಕು.
ಅಗ್ನಿಯಲ್ಲಿ ಅರತ ಉದಕದಂತೆ,
ಬಯಲೊಳಡಗಿದ ಶಬ್ದದಂತೆ ಇರು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Krībhāvaśud'dhate ādavaniravu, beṅki kāṣṭhava kūḍi,
dvandvavāgi uridu, hiṅgi nandidantirabēku.
Huḷi sihiya kūḍi, kūṭasthadinda uḷumeya ghr̥tadantirabēku.
Viṣa śarīradalli vēdhisi, deseyanaḷidantirabēku.
Agniyalli arata udakadante,
bayaloḷaḍagida śabdadante iru,
aighaṭadūra rāmēśvaraliṅgavanarivudakke.