Index   ವಚನ - 49    Search  
 
ಕ್ರಿಯಾಸಂಪದನಾದಲ್ಲಿ, ಉರಿ ಕಾಷ್ಠವ ವೇಧಿಸಿದಂತಿರಬೇಕು. ಆ ಚರಪರ ಒಡಗೂಡಿದಂತಿರಬೇಕು. ಜಲ ಜಲವ ಕೂಡಿದಂತೆ ಹೆರೆಹಿಂಗುವುದಕ್ಕೊಡಲಿಲ್ಲ. ವಾರಿಯ ಶಿಲೆ ಬಲಿದು ನೋಡ ನೋಡ ನೀರಾದಂತಿರಬೇಕು. ಇಷ್ಟಲಿಂಗಸಂಬಂಧದ ನಿಷ್ಠೆ, ಪ್ರಾಣಕೂಟ ಉಭಯ ಮೋಸವಿಲ್ಲದಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.