ವಚನ - 737     
 
ಅಕಟಕಟಾ ದೇಹಾರ ಅಭ್ಯಾಸವಾಯಿತ್ತಲ್ಲಾ! ಅಕಟಕಟಾ ಓಗರ ಉಪಾಹಾರವಾಯಿತ್ತಲ್ಲಾ! ಅಕಟಕಟಾ ಅನುಭಾವ ಹೊಲಬುಗೆಟ್ಟು ಹೋಯಿತ್ತಲ್ಲಾ! ಅಕಟಕಟಾ ಷೋಡಶೋಪಚಾರವನರಿಯದೆ ಕೆಟ್ಟರಲ್ಲಾ ಗುಹೇಶ್ವರಾ.