Index   ವಚನ - 93    Search  
 
ಲಿಂಗಪ್ರಾಣಿಗಳಾದ ಭಕ್ತ ಮಾಹೇಶ್ವರರ ವ್ರತಲಿಂಗ ಸಂಕಲ್ಪವನು ತಿಳಿದು, ವಿಚಾರಿಸಿ ನೋಡಿ, ಮುಹೂರ್ತವ ಮಾಡಿಸಿಕೊಂಡಿಪ್ಪ ಸಮಯದಲ್ಲಿ, ರಾಜಭಯ ಚೋರಭಯದಿಂದವೆ ಕಂಟಕ ಬರಲು, ಅಂಜಿ ಕಥನವಂ ಮಾಡಿಕೊಳಲಾಗದು. ಅದೆಂತೆಂದಡೆ: ಆ ವಿಚಾರವೆಲ್ಲವ ಭಕ್ತ ಮಾಹೇಶ್ವರರು ತಿಳಿದು ನೋಡಿಕೊಂಡು, ಆ ಲಿಂಗಸಮ್ಮರ್ಧನ ಸಂದೇಹವಿಲ್ಲದೆ ಶಿರಿಚ್ಫೇದಮಂ ಮಾಡುವುದು. ಇದಕ್ಕೆ ದ್ರೋಹವಿಲ್ಲ. ಉಂಟೆಂದು ನುಡಿದವವರ, ರವಿಚಂದ್ರರುಳ್ಳ ಪರಿಯಂತರ ಎಕ್ಕಲನರಕದಲ್ಲಿಕ್ಕುವರು. ಇದಕ್ಕೆ ಆದ್ಯರ ವಚನವೆ ಸಾಕ್ಷಿ. ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಐಘಟದೂರ ರಾಮೇಶ್ವರಲಿಂಗವೆ, ಆ ವೀರಮಾಹೇಶ್ವರರನೇನೆಂಬೆನು.