Index   ವಚನ - 109    Search  
 
ಹೆರುವ ಹೆಂಗೂಸು, ಕೂಸು ಸಿಕ್ಕಿ ತನ್ನ ಉಡಿಯ ತೋರುವಂತೆ, ಅದು ಕೂಸಿನ ಆಸೆಯೋ ? ತನ್ನ ಅಪಮಾನದಾಸೆಯೋ ? ತನ್ನ ಅಸುವಿನ ಆಸೆಯೋ ? ಮಾತ ಕಲಿತು, ವೇಷವ ತೋರಿ, ಘಾತುಕತನದಲ್ಲಿ ಉಂಬ ಪಾಶಧಾರಿಗಳಿಗೇಕೆ ನಿರ್ಜಾತನ ಮಾತು ? ಅದು ನೀತಿಯಲ್ಲ, ಐಘಟದೂರ ರಾಮೇಶ್ವರಲಿಂಗ ಅವರ ಬಲ್ಲನಾಗಿ.