•  
  •  
  •  
  •  
Index   ವಚನ - 772    Search  
 
ಅಯ್ಯಾ! ಉಭಯ ಭಿನ್ನವರ್ತನಾಗುಣಂಗಳ ತನ್ನ ಮೂಲ ಚಿತ್ಸ್ವರೂಪವಾದ ಪರಿಪೂರ್ಣ ಮಹಾಜ್ಞಾನ ಪ್ರಕಾಶದ ಬಲದಿಂ ಜಳ್ಳುಮಾಡಿ ತೂರಿ, ತನ್ನನಾದಿಸನ್ಮಾರ್ಗವ ತಿಳಿದು, ಆ ಸನ್ಮಾರ್ಗದೊಳಗೆ ನಿರಾಭಾರಿ ವೀರಶೈವ ಅನಾದಿಶರಣಸ್ವರೂಪವ ತಿಳಿದು, ಆ ಶರಣನ ನಿಜಾಚರಣೆ ಸ್ವಸ್ವರೂಪದ ನಿಲುಕಡೆಯ ಆ ಪರಿಪೂರ್ಣಜ್ಞಾನಪ್ರಕಾಶದೊಳಗೆ ಮಹದರಿವ ಸ್ವಾನುಭಾವದೃಕ್ಕಿನಿಂ ಕಂಡು, ಆ ಮಹದರಿವೆ ಗುರುವಾಗಿ, ಆ ಪರಿಪೂರ್ಣಜ್ಞಾನವೆ ಶಿಷ್ಯನಾಗಿ, ಆ ಸ್ವಾನುಭಾವ ಪ್ರಕಾಶವೆ ಲಿಂಗವಾಗಿ, ತಮ್ಮ ತಮ್ಮ ನಿಜ ಪ್ರಕಾಶಕ್ಕೆ ಪ್ರಭಾವಿಸುವ ಪರಾತ್ಪರಂಜ್ಯೋತಿ ನಿರವಯ ಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಸಂಗನ ಬಸವಣ್ಣನ ಅಷ್ಟದಳ, ಚೌದಳ, ಷಡ್ದಳ, ದಶದಳ, ದ್ವಾದಶದಳ, ಷೋಡಶದಳ, ದ್ವಿದಳ, ಶತದಳ, ಸಹಸ್ರದಳ, ಲಕ್ಷದಳ, ಕೋಟಿದಳಂಗಳಿಂದ ಸರ್ವಾಂಗದಿ ಶೋಭಿಸುವ ಅನಂತದಂಗಳದಲ್ಲಿ ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶಕ್ಕೆ ಮಿಗಿಲಾಗಿ [ಒಪ್ಪುತ್ತಿರ್ಪುದು] ನೋಡ! ಚೆನ್ನಬಸವಣ್ಣ.
Transliteration Ayyā! Ubhaya bhinnavartanāguṇaṅgaḷa tanna mūla citsvarūpavāda paripūrṇa mahājñāna prakāśada baladiṁ jaḷḷumāḍi tūri, tannanādisanmārgava tiḷidu, ā sanmārgadoḷage nirābhāri vīraśaiva anādiśaraṇasvarūpava tiḷidu, ā śaraṇana nijācaraṇe svasvarūpada nilukaḍeya ā paripūrṇajñānaprakāśadoḷage mahadariva svānubhāvadr̥kkiniṁ kaṇḍuĀ mahadarive guruvāgi, ā paripūrṇajñānave śiṣyanāgi, ā svānubhāva prakāśave liṅgavāgi, tam'ma tam'ma nija prakāśakke prabhāvisuva parātparan̄jyōti niravaya śūn'yaliṅgamūrti guhēśvaraliṅgavu saṅgana basavaṇṇana aṣṭadaḷa, caudaḷa,Ṣaḍdaḷa, daśadaḷa, dvādaśadaḷa, ṣōḍaśadaḷa, dvidaḷa, śatadaḷa, sahasradaḷa, lakṣadaḷa, kōṭidaḷaṅgaḷinda sarvāṅgadi śōbhisuva anantadaṅgaḷadalli anantakōṭi sūryacandrāgni prakāśakke migilāgi [opputtirpudu] nōḍa! Cennabasavaṇṇa.
Hindi Translation अय्या उभय भिन्न रूढ़ियों को अपने मूल चित्स्वरूप बना परिपूर्ण महाज्ञान प्रकाश बल से थोथा ओसाकर, अपना आदि सन्मार्ग जानकर उस सन्मार्ग में निराभारी वीरशैव अनादि शरण स्वरूप जानकर, उस शरण के निज चरण स्वस्वरूप स्थित उस परिपूर्ण ज्ञान प्रकाश में महाज्ञान स्वानुभाव दृष्टि से देख, वह महाज्ञान गुरु बनकर, वह परिपूर्ण ज्ञान ही शिष्य होकर, वह स्वानुभाव प्रकाश ही लिंग होकर, अपने अपने निज प्रकाश में प्रभावित कर, परात्पर परंज्योती निरवय शून्य लिंगमूर्ति गुहेश्वर लिंग संगनबसवण्णा के अष्टदल चौदल, षड्दल, दशदल, द्वादशदल, षोडशदल, द्विदल, शतदल, सहस्रदल, लक्षदल, करोड दलों से सर्वांग में शोभायमान अनंत आंगन में अनंतकोटी सूर्य चंद्राग्नि प्रकाश से अधिक देख चेन्नबसवण्णा। Translated by: Eswara Sharma M and Govindarao B N