ಅಯ್ಯಾ! ತನುತ್ರಯಂಗಳು,
ಜೀವತ್ರಯಂಗಳು,
ಆತ್ಮತ್ರಯಂಗಳು, ಅವಸ್ಥಾತ್ರಯಂಗಳು,
ಗುಣತ್ರಯಂಗಳು,
ಮನತ್ರಯಂಗಳು, ತಾಪತ್ರಯಂಗಳು,
ಕಾಲತ್ರಯಂಗಳು,
ಕರ್ಮತ್ರಯಂಗಳು, ಭಾವತ್ರಯಂಗಳು,
ಮಲತ್ರಯಂಗಳು,
ಕರಣತ್ರಯಂಗಳು ಮೊದಲಾದ
ಪ್ರವೃತ್ತಿಮಾರ್ಗವನುಳಿದು,
ಹಿಂದೆ ಹೇಳಿದ ಸದ್ಭಕ್ತ-ಮಹೇಶ್ವರಸ್ಥಲದಲ್ಲಿ ನಿಂದು,
ಅಷ್ಟಾವಧಾನ ಅವಿರಳಾನಂದಮೂರ್ತಿಯಾಗಿ ಪ್ರಕಾಶಿಸುವ
ನಿಜಪ್ರಸಾದಿಯಂತರಂಗದಲ್ಲಿ ಚಿದ್ಘನ ಸ್ವರೂಪವಲೀಲೆಯಿಂ
ಅಂತರಂಗದಲ್ಲಿ ಅಂಗತತ್ತ್ವ, ಲಿಂಗತತ್ತ್ವ,
ಶಿವತತ್ತ್ವ, ಪರತತ್ತ್ವ ಮೊದಲಾದ ಸಮಸ್ತ
ತತ್ತ್ವಂಗಳನೊಳಕೊಂಡು,
ಹದಿನಾರು ಸ್ಥಲಂಗಳ ಗರ್ಭೀಕರಿಸಿಕೊಂಡು,
ನಾಲ್ಕು ಸಾವಿರದ ಮುನ್ನೂರಿಪ್ಪತ್ತು
ಮಂತ್ರಮಾಲಿಕೆಗಳ ಪಿಡಿದುಕೊಂಡು
ಇಪ್ಪತ್ತುನಾಲ್ಕು ಸಕೀಲಗರ್ಭದಿಂ
ಪಾದೋದಕ ಪ್ರಸಾದವ ಕೊಂಡು
ಅಂಗ-ಮನ-ಪ್ರಾಣ-ಭಾವ-ಇಂದ್ರಿಯಂಗಳೆಲ್ಲ
ಪಾದೋದಕ ಪ್ರಸಾದಮಯವೆಂಬ ಹರಗುರುವಾಕ್ಯದಿಂ
ಚಿನ್ನಬಣ್ಣ ಪ್ರಕಾಶದ ಹಾಂಗೆ
ಭಿನ್ನ ಭಾವವಿಲ್ಲದೆ ಏಕರೂಪಿನಿಂದ
ನಿರೀಕ್ಷಣಾಮೂರ್ತಿ ಶಿವಲಿಂಗವಾಗಿ ನೆಲಸಿರ್ಪುದು ನೋಡ!
ನಿರವಯಶೂನ್ಯಲಿಂಗಮೂರ್ತಿ
ಗುಹೇಶ್ವರಲಿಂಗವು ಚೆನ್ನಬಸವಣ್ಣಾ.
Transliteration Ayyā! Tanutrayaṅgaḷu,
jīvatrayaṅgaḷu,
ātmatrayaṅgaḷu, avasthātrayaṅgaḷu,
guṇatrayaṅgaḷu,
manatrayaṅgaḷu, tāpatrayaṅgaḷu,
kālatrayaṅgaḷu,
karmatrayaṅgaḷu, bhāvatrayaṅgaḷu,
malatrayaṅgaḷu,
karaṇatrayaṅgaḷu modalāda
pravr̥ttimārgavanuḷidu,
Hinde hēḷida sadbhakta-mahēśvarasthaladalli nindu,
aṣṭāvadhāna aviraḷānandamūrtiyāgi prakāśisuva
nijaprasādiyantaraṅgadalli cidghana svarūpavalīleyiṁ
antaraṅgadalli aṅgatattva, liṅgatattva,
śivatattva, paratattva modalāda samasta
tattvaṅgaḷanoḷakoṇḍu,
Hadināru sthalaṅgaḷa garbhīkarisikoṇḍu,
nālku sāvirada munnūrippattu
mantramālikegaḷa piḍidukoṇḍu
ippattunālku sakīlagarbhadiṁ
pādōdaka prasādava koṇḍu
aṅga-mana-prāṇa-bhāva-indriyaṅgaḷella
pādōdaka prasādamayavemba haraguruvākyadiṁ
cinnabaṇṇa prakāśada hāṅge
Bhinna bhāvavillade ēkarūpininda
nirīkṣaṇāmūrti śivaliṅgavāgi nelasirpudu nōḍa!
Niravayaśūn'yaliṅgamūrti
guhēśvaraliṅgavu cennabasavaṇṇā.
Hindi Translation अय्या, तनु त्रय, जीव त्रय,
आत्म त्रय, अवस्था त्रय,
मन त्रय, ताप त्रय, काल त्रय,
कर्म त्रय, भाव त्रय, मलत्रय।
करण त्रय, आदि प्रवृत्ति मार्ग छोड़कर
पहले कहैं सद्भक्त-महेश्वर स्थल में खडे-
अष्टावधान अविराळानंद मूर्ति बने प्रकाशित
निज प्रसादी अंतरंग में चित्त घन स्वरूप लीला से
अंतरंग में अंगतत्व, लिंगतत्व, शिवतत्व, परतत्व
आदि समस्त तत्व मिलकर
सोलह स्थलों को जोडकर,
चार हजार तीनसौ बीस मंत्र मालिक पकडे।
चौबीस रहस्य गर्भ से पादोदक, प्रसाद लिए
अंग-मन-प्राण-भावसब इंद्रिय
पादोदक प्रसादमय जैसे हर गुरु वाक्य से
सोने रंग प्रकाश जैसे बिना भिन्न भाव एक रूप से
निरीक्षण मूर्ति शिवलिंग बनकर स्थित हुआ है
देख निरवय शून्य लिंगमूर्ति गुहेश्वर लिंग चेन्नबसवण्णा।
Translated by: Banakara K Gowdappa
Translated by: Eswara Sharma M and Govindarao B N