ವಚನ - 826     
 
ಅರಿವ ಆತ್ಮ, ಕಂಗಳ ಮರೆಯಲ್ಲಿ ಕಾಂಬಂತೆ, ಕಿವಿಯ ಮರೆಯಲ್ಲಿ ಕೇಳುವಂತೆ- ಕಂಗಳು ನಷ್ಟವಾದಲ್ಲಿ ಕರ್ಣ ಬಧಿರವಾದಲ್ಲಿ ಕಾಂಬುದು ಕೇಳುವುದು ಅಲ್ಲಿಯೆ ನಿಂದಿತ್ತು. ಆತ್ಮನ ಅರಿವಾವುದು? ಗುಹೇಶ್ವರನೆಂಬ ಕುರುಹಾವುದು, ಅಂಬಿಗರ ಚೌಡಯ್ಯ?