Index   ವಚನ - 3    Search  
 
ವಾರಿಧಿಯೊಳಗಣ ವಾರಿಕಲ್ಲ ಕಡಿದು ತೊಲೆ ಕಂಬವ ಮಾಡಿ ಮನೆಯ ಕಟ್ಟಿಕೊಂಡು ಒಕ್ಕಲಿರಬಹುದೆ ಅಯ್ಯಾ ? ಅಗ್ನಿಯೊಳಗಿಪ್ಪ ಕರ್ಪುರವ ಕರಡಿಗೆಯ ಮಾಡಿ ಪರಿಮಳವ ತುಂಬಿ, ಅನುಲೇಪನಮಾಡಿ ಸುಖಿಸಬಹುದೆ ಅಯ್ಯಾ ? ವಾಯುವಿನೊಳಗಣ ಪರಿಮಳವ ಹಿಡಿದು ದಂಡೆಯ ಕಟ್ಟಿ ಮಂಡೆಯೊಳಗೆ ಮುಡಿಯಬಹುದೆ ಅಯ್ಯಾ ? ಬಯಲ ಮರೀಚಿಕಾಜಲವ ಕೊಡನಲ್ಲಿ ತುಂಬಿ ಹೊತ್ತು ತಂದು ಅಡಿಗೆಯ ಮಾಡಿಕೊಂಡು ಉಣಬಹುದೆ ಅಯ್ಯಾ ? ನಿಮ್ಮ ನೆರೆಯರಿದು ನೆರೆದು ಪರವಶನಾಗಿ ತನ್ನ ಮರೆದ ಪರಶಿವಯೋಗಿಗೆ ಮರಳಿ ಪರಿಭವಂಗಳುಂಟೆ ಪರಮಗುರು ಶಾಂತಮಲ್ಲಿಕಾರ್ಜುನಾ ?