ಗುರೂಪದೇಶವ ಪಡೆದು ಗುರುಪುತ್ರನೆನಿಸಿಕೊಂಡ ಬಳಿಕ
ಹಿಂದಣ ತಾಯಿ ತಂದೆ ಬಂಧು ಬಳಗವ ನೆನೆಯದಿರಿರೋ.
ಕುಲಗೆಟ್ಟ ಹೊಲೆಯರಿರ ನೆನೆದರೆ ನಿಮಗೆ ಶಿವದ್ರೋಹ ತಪ್ಪದು.
ನಿಮಗೆ ತಂದೆ ತಾಯಿ ಬಂಧು ಬಳಗವ ಹೇಳಿಹೆನು ಕೇಳಿರೊ.
'ಗುರುದೈವಾತ್ ಪರಂ ನಾಸ್ತಿ' ಎಂದುದಾಗಿ,
ಗುರುವೇ ತಾಯಿ, ಗುರುವೇ ತಂದೆ,
ಗುರುವೇ ಬಂಧುಬಳಗವೆಂದು
ನಂಬಬಲ್ಲಡೆ ಆತನೆ ಶಿಷ್ಯನೆಂಬೆ, ಆತನೆ ಭಕ್ತನೆಂಬೆ.
ಅಲ್ಲದಿರ್ದಡೆ ಭವಿಯೆಂಬೆ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.