Index   ವಚನ - 19    Search  
 
ಮಲಮೂತ್ರದ ಬಿಲದಲ್ಲಿ ಕೆಲಗಯ್ಯನಿಕ್ಕಿ, ಮಾಂಸದ ಮೊಟ್ಟೆಯ ಬಲಗೈಯೊಳಿಡಿದು, ಎಲುವಿನ ಮೇಲಣ ಚರ್ಮವ ಅಧರ ಮಧುರವೆಂದು ನಿತ್ಯ ಕಡಿತಿಂಬ ಹೊಲೆಯರಿಗೆ ಎಲ್ಲಿಯದೊ ಶಿವಾಚಾರ ಕುಲಾಚಾರ? ಶೀಲ ವ್ರತ ನೇಮ ನಿತ್ಯ ಶಿವದ್ರೋಹಿಗೆಲ್ಲಿಯದೊ? ಇಲ್ಲ, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.