Index   ವಚನ - 32    Search  
 
ಜೇನುತುಪ್ಪದೊಳು ಬಿದ್ದ ನೊಣವಿನಂತೆ, ಕಾನನದೊಳು ಕಣ್ಣಕಟ್ಟಿ ಬಿಟ್ಟ ಮರುಳನಂತೆ, ಎಲುವ ಕಡಿವ ಶ್ವಾನನಂತೆ, ಮಲವ ಭುಂಜಿಸುವ ಸೂಕರನಂತೆ, ಮಾನಿನಿಯರಿಗೆ ಮೆಚ್ಚಿ ಕೆಡದಿರು ಮನವೆ; ಅಭಿಮಾನಹಾನಿ. ಲಿಂಗ ಅಭಿಮಾನಿಯಾಗಿರು ಕಂಡ್ಯಾ ಮನವೆ ನಿತ್ಯ ಮುಕ್ತಿ ಬೇಕಾದಡೆ. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.