Index   ವಚನ - 36    Search  
 
ಒಬ್ಬರುತ್ತಮರೆಂಬರು. ಒಬ್ಬರು ಕನಿಷ್ಠರೆಂಬರು. ಒಬ್ಬರು ಅಧಮರೆಂಬರು. ಒಬ್ಬರು ಕಷ್ಟನಿಷ್ಠೂರಿಯೆಂಬರು. ಅಂದರದಕೇನು ಯೋಗ್ಯ? ವಿನಯಕಂಪಿತ ಪರಮಾರ್ಥಕ್ಕೂ ಲೌಕಿಕಕ್ಕೂ ವಿರುದ್ಧ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.