Index   ವಚನ - 46    Search  
 
ಕಾಲದ ಗಂಡ, ಕರ್ಮದ ಗಂಡ, ವಿಧಿಯ ಗಂಡ, ವಿಶಸನದ ಗಂಡ, ಇಹದ ಗಂಡ, ಪರದ ಗಂಡ, ಅಂಗದ ಮೇಲೆ ಲಿಂಗವ ಧರಿಸಿ ಸಾವಿಗಂಜುವರೆ? ಸಂದೇಹಿಯಗಂಡ, ಸಂದೇಹ ನಿರ್ಲೇಪಕ್ಕೆ ಶರಣೈಕ್ಯ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.