Index   ವಚನ - 55    Search  
 
ಕೆರೆ ತೊರೆಯ ಮುಳುಗುವ ಅರೆಮರುಳುಗಳು ನೀವು ಕೇಳಿರೊ. ತೊರೆಯಿರೊ ಗುರುಲಿಂಗ ಜಂಗಮದ ನಿಂದ್ಯವ. ತೊರೆಯಿರೊ ಕೊಲೆ ಹುಸಿ ಕಳವು ಪಾರದ್ವಾರ ಅತಿಕಾಂಕ್ಷವ. ತೊರೆಯಿರೊ ಅಷ್ಟಮದ ಅರಿಷಡ್ವರ್ಗವ. ಇವ ತೊರೆಯದೆ ಕೆರೆ ತೊರೆಯ ಮುಳುಗುವ ಬರಿ ಮೂಕೊರೆಯರಿಗೆ ಭಕ್ತಿ ಮುಕ್ತಿಯೆಲ್ಲಿಯದೊ? ಇಲ್ಲ, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.